ಒಬ್ಬ ಕೋಮಟೆಯ ಹೆಂಡತಿಯು ಗರ್ಭಿಣಿಯಾಗಿದ್ದಳು. ಅವಳು ನೀರು ತರಲು ಭಾವಿಗೆ ಹೋದಾಗ, ಅಲ್ಲಿದ್ದ ಒಂದು ಕತ್ತೆಯು ಅವಳನ್ನು ಒದ್ದದ್ದರಿಂದ ಅವಳಿಗೆ ಗರ್ಭಸಾವವಾಯಿತು. ಕೋಮಟೆಗೆ ಸಮಾಚಾರ ಮುಟ್ಟಿತು. ಅವನು ಸಿಟ್ಟಿನಿಂದ ಎದ್ದು ಬಂದು ಭಾವಿಯ ಕಟ್ಟೆಯ ಬಳಿ ನಿಂತಿದ್ದ ಕತ್ತೆಯ ಕಾಲನ್ನು ಕತ್ತರಿಸಿದನು. ಆಮೇಲೆ ತನ್ನ ಹೆಂಡತಿನ ಮನೆಗೆ ಕರೆದುಕೊಂಡು ಹೋಗಿ ಊಪಚರಿಸಿದನು.
ಕತ್ತೆಯ ಕಾಲನ್ನು ಮುರಿದ ವಿಚಾರ ಕತ್ತೆಯ ಯಜಮಾನನಾದ ಅಗಸನಿಗೆ ತಿಳಿಯಿತು. ಅವನು ಖಾಜಿಯ ಬಳಿ ಹೋಗಿ ಕೋಮಟೆಯ ಮೇಲೆ ವ್ಯಾಜ್ಯ ಹೂಡಿದನು.
ಖಾಜಿಯು ವಿಚಾರಣೆ ಮಾಡಿ, "ಕತ್ತೆಯ ಕಾಲು ಸರಿಯಾಗುವವರೆಗೂ ಅದನ್ನು ಕೋಮಟೆಯು ತನ್ನ ವಷದಲ್ಲಿಟ್ಟುಕೊಂಡು ಕಾಪಾಡಬೇಕು. ಅದು ಮೊದಲು ಹೇಗಿತ್ತೊ ಹಾಗೆ ಅದು ಆಗಬೇಕು. ಅಗಸನು ಕೋಮಟಿಯ ಹೆಂಡತಿಯನ್ನು ಕರೆದುಕೊಂಡು ಹೋಗಿ ಮೊದಲು ಅವಳು ಯಾವ ಪ್ರಕಾರ ಬಸುರಿಯಾಗಿದ್ದಳೋ, ಆ ಪ್ರಕಾರ ಅವಳು ಗರ್ಭಿಣಿಯಾಗುವವರೆಗೆ ತನ್ನ ಮನೆಯಲ್ಲಿ ಇಟ್ಟುಕೊಂಡು ಆನಂತರ ಅವಳನ್ನು ಕೋಮಟೆಯ ವಶಕ್ಕೆ ಕೊಡಬೇಕು" ಎಂಬುದಾಗಿ ತೀರ್ಪು ಕೊಟ್ಟನು.